ಭೂರಿಶ್ರವ
	ಚಂದ್ರವಂಶದ ಸೋಮದತ್ತ ರಾಜನ ಮಗ. ಭೂರಿ, ಶಲ ಎಂಬಿಬ್ಬರು ಒಡಹುಟ್ಟಿದವರು. ಈತ ಮಹಾಭಾರತಯುದ್ಧದಲ್ಲಿ ದುರ್ಯೋಧನನ ಪರವಾಗಿ ಯುದ್ಧಮಾಡಿದ. ನಾಲ್ಕನೆಯ ದಿನದ ಯುದ್ಧದಲ್ಲಿ ಸಾತ್ಯಕಿಯೊಂದಿಗೆ ಘೋರವಾಗಿ ಹೋರಾಡಿದ. ಐದನೆಯ ದಿನದ ಯುದ್ಧದಲ್ಲಿ ಈತನ ಹತ್ತುಮಂದಿ ಮಕ್ಕಳನ್ನೂ ಸಾತ್ಯಕಿ ಕೊಂದುಹಾಕಿದ. ಹದಿನಾಲ್ಕನೆಯ ದಿನದ ಹಗಲಿನಲ್ಲಿ ಈತ ಸಾತ್ಯಕಿಯೊಂದಿಗೆ ಯುದ್ಧಮಾಡುತ್ತಿದ್ದಾಗ ಸಾತ್ಯಕಿಯ ಕೊರಳನ್ನು ಕಡಿಯುವುದಕ್ಕಾಗಿ ಭೂರಿಶ್ರವ ಖಡ್ಗವನ್ನು ಎತ್ತಿದ್ದು ನೋಡಿದ ಅರ್ಜುನ ಭೂರಿಶ್ರವನ ತೋಳನ್ನು ಕತ್ತರಿಸಿದ. ತರುವಾಯ ಭೂರಿಶ್ರವ ಪ್ರಾಯೋಪವೇಶಮಾಡಿ ಕುಳಿತಿದ್ದಾಗ ಸಾತ್ಯಕಿ ಇವನ ರುಂಡವನ್ನು ಕತ್ತರಿಸಿ ಹಾಕಿದ.								
	(ಕೆ.ವೈ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ